Tuesday, March 17, 2026
HomeTechnology65 ಕೋಟಿಗೂ ಅಧಿಕ VIEWS.. ವೀಕ್ಷಣೆಯಲ್ಲಿ Ind vs Eng 2nd Semifinal ವಿಶ್ವದಾಖಲೆ, 2024ರ...

65 ಕೋಟಿಗೂ ಅಧಿಕ VIEWS.. ವೀಕ್ಷಣೆಯಲ್ಲಿ Ind vs Eng 2nd Semifinal ವಿಶ್ವದಾಖಲೆ, 2024ರ ಫೈನಲ್ ದಾಖಲೆ ಉಡೀಸ್!

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದ್ದು ಪ್ರಮುಖವಾಗಿ ವೀಕ್ಷಣೆಯಲ್ಲಿ ವಿಶ್ವದಾಖಲೆ ನಿರ್ಮಿಸಿದೆ.

ರನ್ ಗಳ ಸುರಿಮಳೆಯನ್ನೇ ಕಂಡ ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಿಂದ ಬರೊಬ್ಬರಿ 499 ರನ್ ಗಳು ಹರಿದುಬಂದಿದ್ದು, ಈ ಪಂದ್ಯವನ್ನು ಭಾರತ ಕೇವಲ 7 ರನ್ ಗಳ ಅಂತರದಲ್ಲಿ ರೋಚಕ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಪಂದ್ಯ ಸಿಕ್ಸರ್‌ಗಳು, ಬೌಂಡರಿಗಳಲ್ಲೂ ದಾಖಲೆ ಬರೆದಿದ್ದು, ಈ ಪಂದ್ಯದ ಉಭಯ ಇನ್ನಿಂಗ್ಸ್ ಗಳಲ್ಲಿ 34 ಸಿಕ್ಸರ್, 39 ಬೌಂಡರಿಗಳು ಬಂದಿವೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.

ಭಾರತ ನೀಡಿದ್ದ 254 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ ಜೇಕಬ್ ಬೆಥಲ್ ಅವರ ಅಮೋಘ ಶತಕದ ನೆರವಿನಿಂದ ಗೆಲುನಂಚಿಗೆ ಬಂದು ತಲುಪಿತ್ತು. ಆದರೆ ಭಾರತದ ಅನುಭವಿ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿ ನೆರವಿನಿಂದ ಭಾರತ ಸೋಲಿನಿಂದ ಪಾರಾಯಿತು.

Suhas
Suhashttps://onlinemaharashtra.com/
Suhas Bhokare is a journalist covering News for https://onlinemaharashtra.com/
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments