ಕರ್ನಾಟಕದ 11 ಜಿಲ್ಲೆಗಳಲ್ಲಿ ಹೊಸದಾಗಿ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 2 ಕಡೆ ಹೊಸ ಠಾಣೆ ಬರಲಿದ್ದು, ಉಳಿದಂತೆ ದಾವಣಗೆರೆ ಕೋಲಾರ ಸೇರಿ 11 ಜಿಲ್ಲೆಯ ವಿವಿಧೆಡೆ ಹೊಸ ಠಾಣೆ ತಲೆ ಎತ್ತಲಿವೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹೈಲೈಟ್ಸ್:
- ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ.
- ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವ ಘೋಷಣೆ.
- ದಕ್ಷಿಣ ಕರ್ನಾಟಕದಲ್ಲಿ 2 ಕಡೆ, ಉಳಿದಂತೆ ದಾವಣಗೆರೆ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ತಲೆ ಎತ್ತಲಿವೆ ಠಾಣೆಗಳು.

| ಕ್ರ.ಸಂ. | ಜಿಲ್ಲೆ | ಪೊಲೀಸ್ ಠಾಣೆ |
| 1 | ದಕ್ಷಿಣ ಕನ್ನಡ | ಮಾಣಿ ಪೊಲೀಸ್ ಠಾಣೆ |
| 2 | ದಕ್ಷಿಣ ಕನ್ನಡ | ಸಜಿಪನಡು ಪೊಲೀಸ್ ಠಾಣೆ |
| 3 | ಬೆಂಗಳೂರು ಗ್ರಾಮಾಂತರ | ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ |
| 4 | ಬೆಳಗಾವಿ | ಯರಗಟ್ಟಿ ಪೊಲೀಸ್ ಠಾಣೆ |
| 5 | ಯಾದಗಿರಿ | ಕಕ್ಕೇರಾ ಪೊಲೀಸ್ ಠಾಣೆ |
| 6 | ಚಿತ್ರದುರ್ಗ | ಹಿರಿಯೂರು ಸಂಚಾರ ಪೊಲೀಸ್ ಠಾಣೆ |
| 7 | ದಾವಣಗೆರೆ | ಆನಗೋಡು ಪೊಲೀಸ್ ಠಾಣೆ |
| 8 | ಹಾವೇರಿ | ತಿಳುವಳ್ಳಿ ಪೊಲೀಸ್ ಠಾಣೆ |
| 9 | ಮೈಸೂರು | ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ |
| 10 | ವಿಜಯಪುರ | ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ |
| 11 | ಕೋಲಾರ | ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ |
| 12 | ಚಾಮರಾಜನಗರ | ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ |
ಬಜೆಟ್ 2026 ರಲ್ಲಿ ಗೃಹ ಹಾಗೂ ಒಳ ಆಡಳಿತ ಇಲಾಖೆಗೆ ಸಿಕ್ಕಿದ್ದೇನು?
- ಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 8,000 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ.
- ಸಿಬ್ಬಂದಿಗಳ ವಸತಿಗಾಗಿ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ವಸತಿಗೃಹಗಳ ನಿರ್ಮಾಣ ಕಾಮಗಾರಿ ಆರಂಭ. ಸುವರ್ಣ ಸೌಧದ ಬಂದೋಬಸ್ತ್ ಸಿಬ್ಬಂದಿಗಾಗಿ 20 ಕೋಟಿ ರೂ. ವೆಚ್ಚದಲ್ಲಿ 1,000 ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲು ಶಾಶ್ವತ ಬ್ಯಾರಕ್‌ಗಳ ನಿರ್ಮಾಣ.
- ಸಂಚಾರ ದಟ್ಟಣೆ ನಿಯಂತ್ರಿಸಲು 25 ಕೋಟಿ ರೂ. ವೆಚ್ಚದಲ್ಲಿ ‘ಸಂಯೋಜಿತ ಡಿಜಿಟಲ್ ವೇದಿಕೆ’ಯನ್ನು ರೂಪಿಸಲಾಗುತ್ತದೆ.
- ನಗರ ಪೊಲೀಸಿಂಗ್ ಸವಾಲುಗಳನ್ನು ಎದುರಿಸಲು ಬೆಂಗಳೂರಿನಲ್ಲಿ ಈ ನಾವೀನ್ಯತೆ ಕೇಂದ್ರವನ್ನು ಸ್ಥಾಪನೆ.
- ಪೊಲೀಸ್ ಆಧುನೀಕರಣ ಯೋಜನೆಯಡಿ ಸಿಸಿಟಿವಿ, ಬಾಡಿ ವರ್ನ್ ಕ್ಯಾಮೆರಾ, ಡ್ರೋನ್ ಮುಂತಾದವುಗಳಿಗಾಗಿ ಒಟ್ಟು 354 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದೆ.
- ಗೃಹ ಇಲಾಖೆಯ ಚಲನಶೀಲತೆ ಹೆಚ್ಚಿಸಲು 75 ಕೋಟಿ ರೂ. ವೆಚ್ಚದಲ್ಲಿ ಹೊಸ ವಾಹನಗಳನ್ನು ಒದಗಿಸಲಾಗಿದೆ.
