Thursday, March 5, 2026
HomeTechnologyಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತದ ದೌರ್ಬಲ್ಯ ಬಗ್ಗೆ ಉಲ್ಲೇಖಿಸಿದ ಮಾಜಿ ಕೀಪರ್

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತದ ದೌರ್ಬಲ್ಯ ಬಗ್ಗೆ ಉಲ್ಲೇಖಿಸಿದ ಮಾಜಿ ಕೀಪರ್

ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್ ಪಂದ್ಯದ ಸೆಮಿಫೈನಲ್ ನಲ್ಲಿ ಭಾರತ ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣೆಸಲಿದ್ದು, ಈ ಮಹತ್ವದ ಪಂದ್ಯಕ್ಕೆ ಮುನ್ನ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಭಾರತೀಯ ತಂಡದ ದೌರ್ಬಲ್ಯವನ್ನು ಪ್ರಸ್ತಾವಿಸಿ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.

ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕುವ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರೂ, ಭಾರತದ ದೊಡ್ಡ ದೌರ್ಬಲ್ಯವೆಂದರೆ ಕಳಪೆ ಫೀಲ್ಡಿಂಗ್. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟೂರ್ನಿಯಲ್ಲಿ ಇದುವರೆಗೆ 13 ಕ್ಯಾಚ್ ಗಳನ್ನು ಕೈಚೆಲ್ಲಿದೆ. ಭಾರತ ತಂಡದ ಕ್ಯಾಚಿಂಗ್ ಸಾಮರ್ಥ್ಯ ಶೇಕಡ 72.7ಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣ. ಇದಕ್ಕೆ ತದ್ವಿರುದ್ಧವಾಗಿ ಕಳಪೆ ಫೀಲ್ಡಿಂಗ್‌ನಿಂದಾಗಿ ಟೀಕೆಗಳಿಗೆ ಗುರಿಯಾಗಿರುವ ಪಾಕಿಸ್ತಾನದ ಕ್ಯಾಚಿಂಗ್ ಕ್ಷಮತೆ ಶೇಕಡ 83.3ರಷ್ಟಿದೆ.

“ಆತಂಕದ ಅಂಶವೆಂದರೆ ಫೀಲ್ಡಿಂಗ್; ಈಡನ್ ಗಾರ್ಡನ್ಸ್ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಮಾತ್ರವಲ್ಲ; ಕಳೆದ ಒಂದೂವರೆ ವರ್ಷದಿಂದ ಈ ಸಮಸ್ಯೆ ಇದೆ. ನಾವು ಸಾಕಷ್ಟು ಕ್ಯಾಚ್ ಗಳನ್ನು ಕೈಚೆಲ್ಲುತ್ತಿದ್ದೇವೆ. ಈ ವಿಚಾರದಲ್ಲಿ ಭಾರತ ಸುಧಾರಿಸಲೇಬೇಕು” ಎಂದು ಪಾರ್ಥಿವ್ ಪಟೇಲ್ ಜಿಯೊ ಹಾಟ್‌ಸ್ಟಾರ್‌ನಲ್ಲಿ ಹೇಳಿದ್ದಾರೆ.

“ಈಡನ್ ಗಾರ್ಡನ್ ನಲ್ಲಿ 190ಕ್ಕೂ ಹೆಚ್ಚು ರನ್ ಗಳನ್ನು ಬೆನ್ನಟ್ಟಿ ಜಯ ಸಾಧಿಸಿರುವುದು ಅದ್ಭುತ ವಿಜಯ. ಅದು ಆತ್ಮವಿಶ್ವಾಸವನ್ನೂ ವೃದ್ಧಿಸಿದೆ. ಟಾಸ್ ಗೆದ್ದ ಭಾರತ, ಇಬ್ಬನಿ ಬೀಳುತ್ತದೆ ಎಂದು ಭಾವಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಟ ಮುಗಿದಾಗ ಇಬ್ಬನಿ ಇರಲೇ ಇಲ್ಲ. ಆದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಈ ನಾಕೌಟ್ ನಲ್ಲಿ 190ಕ್ಕಿಂತ ಹೆಚ್ಚು ರನ್ ಬೆನ್ನಟ್ಟಲು ಆಟಗಾರರು ಅದ್ಭುತ ಪ್ರದರ್ಶನ ನೀಡಬೇಕು. ಸಂಜು ಸ್ಯಾಮ್ಸನ್ ಅದನ್ನು ಸಾಧಿಸಿದರು” ಎಂದು ಪಾರ್ಥಿವ್ ಬಣ್ಣಿಸಿದ್ದಾರೆ.

Suhas
Suhashttps://onlinemaharashtra.com/
Suhas Bhokare is a journalist covering News for https://onlinemaharashtra.com/
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments